kannadada e loka



ಉಡುಪಿ ಸಮೀಪದ ಶಿರ್ವದ ಸಂತ ಮೇರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿರುವ ನಾನು ಇಂಟರ್‌ನೆಟ್‌ ಲೋಕದ ಎಲ್ಲಾ ಹಂತಗಳಲ್ಲೂ ಕನ್ನಡವನ್ನು ಹೇಗೆ ಬಳಸಬಹುದೆಂಬ ಬಗ್ಗೆ "ಕನ್ನಡದ ಈ ಲೋಕ ಎಂಬ ಪುಸ್ತಕವನ್ನು ಬರೆದಿದ್ದೇನೆ. ಆ ಪುಸ್ತಕದಲ್ಲಿ ಈ ಕೆಳಗಿನ ವಿಷಯಗಳನ್ನು ಅಳವಡಿಸಿದ್ದೇನೆ.


ಕನ್ನಡದಲ್ಲಿ ಇ ಮೈಲ್
ಕನ್ನಡದಲ್ಲಿ ಉಚಿತವಾಗಿ ಬ್ಲಾಗ್ ನಿರ್ಮಾಣ
ಬ್ಲಾಗ್‌ನಲ್ಲಿ ಲೇಖನ, ಕವನ ಇತ್ಯಾದಿ ಬರೆಯುವುದು
ಕನ್ನಡ ಆನ್ ಲೈನ್ ವಿಶ್ವಕೋಶ
ಕನ್ನಡ ಆನ್ ಲೈನ್ ಪದಕೋಶ
ಕನ್ನಡ ಸರ್ಚ್ ಇಂಜಿನ್
ಕನ್ನಡ ಇ ಪತ್ರಿಕೆಗಳು
ಕನ್ನಡ ಟೈಪ್ ಮಾಡಲು ಬರಹ ಸಾಫ್ಟ್‌ವೇರ್
ಕನ್ನಡ ಟೈಪ್ ಮಾಡಲು ನುಡಿ ಸಾಫ್ಟ್‌ವೇರ್
ಫೇಸ್ ಬುಕ್‌ನಲ್ಲಿ ಕನ್ನಡ
ಕನ್ನಡ ಸ್ಲೇಟ್‌
ಪದ ಸಾಫ್ಟ್‌ವೇರ್ ಇತ್ಯಾದಿ
ಕನ್ನಡದ ಈ ಲೋಕ ಪುಸ್ತಕದ ವಿಷಯಗಳನ್ನು ಕನ್ನಡ ಉಪನ್ಯಾಸಕರು, ಕನ್ನಡ ಬ್ಲಾಗ್ ಇತ್ಯಾದಿಗಳ ಬಗ್ಗೆ ಆಸಕ್ತಿಯುಳ್ಳ ಇತರ ಉಪನ್ಯಾಸರು, ಜರ್ನಲಿಸಂ ವಿದ್ಯಾರ್ಥಿಗಳು, ಕನ್ನಡ ಎಂ.ಎ. ವಿದ್ಯಾರ್ಥಿಗಳಿಗೆ ತರಬೇತಿ ನೀಡಬೇಕೆಂದು 14-10-2010ರಂದು ಶಿರ್ವದ ಸಂತ ಮೇರಿ ಕಾಲೇಜಿನಲ್ಲಿ ಇ ತರಬೇತಿ ಶಿಬಿರವನ್ನು ಏರ್ಪಡಿಸಿದ್ದೇವೆ.