Thursday, March 7, 2013


N. Bhavani Shankar, St. Mary's College, Shirva, Udupi Dt.


ಔಷಧಗಳಿಲ್ಲದೆ  ಡಯಾಬಿಟೀಸ್ ಪೂರ್ತಿ ಗುಣವಾಗುತ್ತದೆ-ಕೃತಿ ಬಿಡುಗಡೆ



ಶಿರ್ವ ಸಂತ ಮೇರಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಎನ್.ಭವಾನಿಶಂಕರ್ ರವರ 26 ನೇ ಕೃತಿಯಾದ ಡಯಾಬಿಟೀಸ್ ಪೂರ್ತಿ ಗುಣವಾಗುತ್ತದೆ ಎನ್ನುವ 240 ಪುಟಗಳ ಸಂಶೋಧನಾಧಾರಿತವಾದ ಬರಹವನ್ನು ಮುನಿಯಾಲ್ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇ ದ ಮೆಡಿಕಲ್ ಸೈನ್ಸಸ್ನಲ್ಲಿ ರೀಡರ್ ಆಗಿರುವ ವೈದ್ಯರಾದ ಡಾ. ಪ್ರೀತಿ (ಎಂ.ಎಸ್. ಆಯುವರ್ೇದ) ಯವರು ಕನ್ನರಪಾಡಿಯ ಲಕ್ಷ್ಮಿ ಪ್ಲಾಟಿನಮ್ನಲ್ಲಿ ಬಿಡುಗಡೆಗೊಳಿಸಿದರು. 
ಇಂದಿನ ಎಲ್ಲಾ ಕಾಯಿಲೆಗಳಿಗೆ ಕೈಗಾರಿಕೀಕರಣದ ಅನಂತರದ ಆಹಾರ ಪದ್ಧತಿಯು ಹೇಗೆ ಮಾರಕವಾಗುತ್ತದೆ ಎಂಬುದನ್ನು ಲೇಖಕರು ಸಮರ್ಥವಾಗಿ ಚಿತ್ರಿಸುತ್ತ ಈ ಡಯಾಬಿಟೀಸ್ ಎಂಬುದು ಕಣ್ಣು, ಹೃದಯ, ನರ ಮಂಡಲ, ಮೂತ್ರಪಿಂಡ, ಆಥ್ರೈಟಿಸ್ ಇತ್ಯಾದಿ ಕಾಯಿಲೆಗಳಿಗೆ ಕಾರಣವಾಗುವ ಚಿತ್ರಣವನ್ನು ನೀಡುತ್ತಾರೆ. ಆಹಾರ ಮತ್ತು ಜೀವನ ಶೈಲಿಯ ಕಾರಣಕ್ಕಾಗಿ ಬರುವ ಈ ಡಯಾಬಿಟೀಸ್ ಕಾಯಿಲೆಯ ಗುಣವಾಗುವಿಕೆಗಾಗಿ ಸಾಯುವ ತನಕ ಔಷಧವನ್ನು ತೆಗೆದುಕೊಳ್ಳಬೇಕಾಗಿರುವುದು ಇಂದಿನ ದೊಡ್ಡ ದುರಂತ. 

ಡಯಾಬಿಟೀಸ್ ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯನ್ನು ಯಾವ ಔಷಧವೂ ಇಲ್ಲದೆ ಗುಣಪಡಿಸಿಕೊಳ್ಳುವ ಬಗ್ಗೆ ಪಶ್ಚಿಮ ದೇಶಗಳ ಡಾ. ಕಾಲ್ಡ್ವೆಲ್ ಬಿ. ಎಸೆಲ್ ಸ್ಟೈನ್, ಡಾ. ಜಾನ್ ಎ. ಮೆಕ್ ಡೌಗೆಲ್, ಡಾ. ಡೀನ್ ಆರ್ನಿಶ್ ಡಾ. ಡೆನಿಸ್ ಬುರ್ಕಿಟ್ ಮತ್ತು ನಮ್ಮ ದೇಶದ ಡಾ. ಬಿಸ್ವರೂಪ್ ರಾಯ್ ಚೌಧುರಿಯವರು ಮಾಡಿರುವ ಸಂಶೋಧನೆಗಳ ಪೂರ್ಣ ವಿವರಗಳನ್ನು ನೀಡುತ್ತಾರೆ. ಇಂತಹ ಒಂದು ಪದ್ಧತಿಯನ್ನು ತನ್ನ ಮೇಲೆಯೇ ಗುಣಪಡಿಸಿಕೊಂಡುದರ ವಿಸ್ತಾರವಾದ ವಿವರಣೆಯನ್ನೂ ನೀಡುತ್ತಾರೆ. ಸರಳ ಶೈಲಿಯ ಈ ಕನ್ನಡ ಕೃತಿ ವೈದ್ಯಕೀಯ ಲೋಕಕ್ಕೆ ಒಂದು ಅದ್ಭುತ ಕೊಡುಗೆ ಎಂದು ಅವರು ವಿವರಿಸಿದರು.

ಪುಸ್ತಕದ ಪ್ರಕಾಶಕರಾದ ವಿ.ಶಾರದಾರವರು ಸ್ವಾಗತಿಸಿದರು. ಶ್ರೀ ಬಾಬುರಾಯ ಶೆಣೈರವರು ಸಮಾಜದ ಅರಿವನ್ನು ಹೆಚ್ಚಿಸುವ ಎನ್.ಭವಾನಿಶಂಕರ್ರವರ ವೈವಿಧ್ಯಮಯವಾದ 26 ಕೃತಿಗಳ ಬಗ್ಗೆ ಮಾತನಾಡುತ್ತ ಶುಭ ಕೋರಿದರು.   ಡಾ. ಸುಧೀಂದ್ರ ಮೊಹರರ್, ಶ್ರೀ ಜಗದೀಶ್ ಕಾಮತ್ರವರು ಉಪಸ್ಥಿತರಿದ್ದರು.  ಶ್ರೀಮತಿ ಸಾವಿತ್ರಿ ವಂದಿಸಿದರು.         



ಭಾರತ ದೇಶದ ಭ್ರಷ್ಟಾಚಾರದ ಹಗರಣಗಳನ್ನು ಪರಿಚಯಿಸುವ ಕೃತಿ
ಎನ್.ಭವಾನಿಶಂಕರ್‌ರವರ
"ದೇಶ ದ್ರೋಹಿಗಳ ಕತೆ"-ಕೃತಿ ಬಿಡುಗಡೆ



ಸಂತ ಮೇರಿ ಕಾಲೇಜಿನಲ್ಲಿ ಎನ್.ಭವಾನಿಶಂಕರ್ರವರು  ಬರೆದ ದೇಶ ದ್ರೋಹಿಗಳ ಕತೆ ಎಂಬ ಅವರ 24ನೇ ಕೃತಿಯನ್ನು ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಪದ್ಮನಾಭ ಭಟ್ರವರು ಬಿಡುಗಡೆ ಮಾಡಿದರು. ಅವರು ಮಾತನಾಡುತ್ತ ಈ ಕೃತಿಯು ಭಾರತ ದೇಶದ ಈವರೆಗಿನ ಎಲ್ಲಾ ಅಂದರೆ ಕಾಮನ್ವೆಲ್ತ್, ಟುಜಿ, ತ್ರಿಜಿ..... ಯಂತಹ ನೂರಾರು ಹಗಣರಣಗಳನ್ನು ಪರಿಚಯಿಸುತ್ತದೆ. ದೇಶದ ರಾಜಕಾರಣಿಗಳು ಪ್ರಜೆಗಳ ತೆರಿಗೆಯ ಹಣವಾದ- ಉತ್ತಮವಾದ ರಸ್ತೆ, ನೀರಿನ ವ್ಯವಸ್ಥೆ, ಸಾರಿಗೆ, ವಿದ್ಯೆ, ಆಸ್ಪತ್ರೆ, ಅಣೆಕಟ್ಟು..... ಗಳಿಗೆ ಬಳಕೆಯಾಗಬಹುದಾದ  ಕೋಟ್ಯಂತರ ರೂಪಾಯಿಗಳನ್ನು ಹೇಗೆ ಲೂಟಿ ಹೊಡೆಯುತ್ತಾರೆ ಎಂಬುದನ್ನು ವಿವರವಾಗಿ ಚಿತ್ರಿಸುತ್ತದೆ. ರಾಜಕಾರಣಿಗಳು ದುಡ್ಡು ಮಾಡುವ ವಿಧಾನವನ್ನು, ಅದರ ತಂತ್ರಗಳನ್ನು ವಿವರವಾಗಿ ಪರಿಚಯಿಸುತ್ತ, ಇದನ್ನು ತಡೆಗಟ್ಟಲು ಇರುವಂತಹ ಮಾಹಿತಿ ಹಕ್ಕು ಕಾಯಿದೆ ಮತ್ತು ಇತರ ಅನೇಕ ವಿಧಾನಗಳನ್ನು ಪರಿಚಯಿಸುತ್ತದೆ. ಪ್ರಜೆಗಳು ಪಂಚೆ, ಸೀರೆ, ಹೆಂಡಗಳಿಗೆ ತಮ್ಮನ್ನು ಮಾರಿಕೊಳ್ಳದೆ ತಮ್ಮ ಮತದಾನವೆಂಬ ಕ್ರಾಂತಿಕಾರಕ ರೀತಿಯ ಮೂಲಕ ದೇಶದ ಭವಿಷ್ಯವನ್ನು ಅಭಿವೃದ್ಧಿಯ ಕಡೆಗೆ ಬದಲಾಯಿಸುವ ಕ್ರಮವನ್ನು ತಿಳಿಸುತ್ತದೆ ಎಂದು ಹೇಳಿದರು.
ಪ್ರೊ. ಗೋಪಾಲಕೃಷ್ಣ ಸಾಮಗರವರು ಸ್ವಾಗತಿಸಿದರು. ಪ್ರಾಂಶುಪಾಲರಾದ ಪ್ರೊ. ವಿ.ಎನ್.ರಾಜನ್ರವರು ಎನ್.ಭವಾನಿಶಂಕರ್ರವರು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕೃತಿ ರಚನೆ ಮಾಡುವುದನ್ನು ಮೆಚ್ಚಿಕೊಂಡರು. ಪ್ರೊ. ವಿಠಲ ನಾಯಕ್ ಶುಭಾಶಂಸನೆಗೈದರು.  ಪ್ರೊ. ಯಶೋದ ವಂದಿಸಿದರು. ಕುಮಾರಿ ಸುವೇತ ಕಾರ್ಯಕ್ರಮವನ್ನು ನಿರೂಪಿಸಿದರು.  

ಪೆಟ್ರೀಶಿಯ ಡೇಸ ಬರೆದ "ನಾನು ನೋಡಿದ ಲಂಡನ್"-ಕೃತಿ ಬಿಡುಗಡೆ


ಸಂತ ಮೇರಿ ಕಾಲೇಜಿನಲ್ಲಿ ಪೆಟ್ರೀಶಿಯ ಡೇಸರವರು ಬರೆದ ನಾನು ನೋಡಿದ ಲಂಡನ್ ಕೃತಿಯನ್ನು ಕಾಲೇಜಿನ ಪ್ರಾಧ್ಯಾಪಕರಾದ ಸುಬ್ರಹ್ಮಣ್ಯ ಬಿ. ಅವರು ಬಿಡುಗಡೆ ಮಾಡಿದರು. ಅವರು ಮಾತನಾಡುತ್ತ ಈ ಕೃತಿಯು ಪೆಟ್ರೀಶಿಯ ಅವರ ಲಂಡನ್ನ ಭೇಟಿಯನ್ನು ಕಣ್ಣಿಗೆ ಕಟ್ಟುವಂತೆ ವಣರ್ಿಸಿದೆ. ಅವರು ತಾನು ಲಂಡನ್ನಿನಲ್ಲಿ ಕಂಡಂತಹ ಸಾಮಾನ್ಯ ಜನರ ಜೀವನ, ಅಲ್ಲಿನ ಮ್ಯೂಸಿಯಂ, ತಂತ್ರಜ್ಞಾನದಲ್ಲಿನ ಅವರ ಪ್ರಗತಿ, ಜನರ ಶಿಸ್ತು, ಕಲಾತ್ಮಕತೆಯನ್ನು ಅತ್ಯಂತ ಚೆನ್ನಾಗಿ ಬರೆದಿದ್ದಾರೆ.  ಅಲ್ಲಿನ ಸುಂದರವಾದ ರಸ್ತೆಗಳು, ಎಲ್ಲಿ ನೋಡಿದರೂ ಒಂದು ತುಣುಕಿನಷ್ಟೂ ಕಸವಿಲ್ಲದಿರುವುದು, ಕಾರಿನಲ್ಲಿನ ನ್ಯಾವಿಗೇಟರ್ ಉಪಕರಣ, ಅದು ಮಾತಿನ ಮೂಲಕ ದಾರಿ ತೋರುವ ಕ್ರಮ, ವಯಸ್ಸಾದವರು ಬಸ್ಸು ಇಳಿಯುವಾಗ ಬಸ್ಸಿನ ಮೆಟ್ಟಿಲು ಕುಸಿದು ರಸ್ತೆಯ ಮಟ್ಟಕ್ಕೆ ಬರುವುದು... ಹೀಗೆ ಅನೇಕ ವಿವರಗಳು ಈ ಕೃತಿಯಲ್ಲಿವೆ. ಈ ಕೃತಿಯು ಅತ್ಯಾಕರ್ಷಕವಾಗಿದೆ ಎಂದರು.

ಲಂಡನ್ನಿನಲ್ಲಿ ನನ್ನ 35 ದಿನಗಳು

ಸಂತ ಮೇರಿ ಕಾಲೇಜಿನ ಅಂತಿಮ ಬಿಕಾಂನ ವಿದ್ಯಾಥರ್ಿನಿಯಾದ ಪೆಟ್ರೀಶಿಯ ಡೇಸರವರು ತಾವು ಪರೀಕ್ಷೆಯ ಅನಂತರದ ರಜಾ ದಿನಗಳಲ್ಲಿ ಲಂಡನ್ನಿಗೆ ಪ್ರವಾಸ ಹೋದುದರ ತಮ್ಮ ಅನುಭವವನ್ನು ಹಂಚಿಕೊಂಡರು. ತಾವು ಲಂಡನ್ನಿನಲ್ಲಿ ಕಳೆದ 35 ದಿನಗಳ ಅನುಭವವನ್ನು ಎಳೆ ಎಳೆಯಾಗಿ ವಿವರಿಸಿದರು. ಅಲ್ಲಿನ ಸುಂದರವಾದ ರಸ್ತೆಗಳು, ಎಲ್ಲಿ ನೋಡಿದರೂ ಒಂದು ತುಣುಕೂ ಕಸವಿಲ್ಲದಿರುವುದು, ಕಾರಿನಲ್ಲಿನ ನ್ಯಾವಿಗೇಟರ್ ಉಪಕರಣ, ಅದರಲ್ಲಿ ತಾವು ಹೋಗುವ ಸ್ಥಳದ ಹೆಸರನ್ನು ಟೈಪಿಸಿದರೆ ಸಾಕು ಅದು ಮಾತಿನ ಮೂಲಕ ನೇರ, ಎಡಕ್ಕೆ, ಬಲಕ್ಕೆ ಎಂದು ಹೇಳುತ್ತಾ ದಾರಿ ತೋರುವ ಕ್ರಮ, ವಯಸ್ಸಾದವರು ಬಸ್ಸು ಇಳಿಯುವಾಗ ಬಸ್ಸಿನ ಮೆಟ್ಟಿಲು ಕುಸಿದು ರಸ್ತೆಯ ಮಟ್ಟಕ್ಕೆ ಬರುವುದು ಹೀಗೆ ವಿವಿಧ ಅನುಭವಗಳನ್ನು ನಿರೂಪಿಸಿದರು.

ಅಲ್ಲಿನ ಮಕ್ಕಳು 18 ನೇ ವಯಸ್ಸಿಗೆ ತಂದೆ ತಾಯಿಯಿಂದ ಬೇರಾಗುತ್ತಾರೆ. ಅದಕ್ಕಾಗಿ ತಂದೆ ತಾಯಿಗಳು ನಾಯಿ ಬೆಕ್ಕುಗಳನ್ನು ಬಹಳ ಪ್ರೀತಿಯಿಂದ ಸಾಕುತ್ತಾರೆ. ಪಕ್ಕದ ಮನೆಯ ಬೆಕ್ಕಿಗೆ ಜಾಯಿಂಡೀಸ್ ಬಂದು ಅದಕ್ಕಾಗಿ ಖಚರ್ಾದ 70000 ರೂಪಾಯಿಯ ಬಗ್ಗೆಯೂ ಹೇಳಿದರು. ಅಲ್ಲಿನ ಯುವ ಗಂಡು ಹೆಣ್ಣುಗಳು ಅತ್ಯಂತ ಮುಕ್ತವಾಗಿ ಬದುಕುವುದು ತನಗೆ ಇಷ್ಟವಾಗಲಿಲ್ಲ ಎಂದರು. ಆದರೆ ಅಲ್ಲಿನ ಶಿಸ್ತು, ಪ್ರತಿಯೊಬ್ಬರೂ ಕಾನೂನಿಗೆ ಕೊಡುವ ಗೌರವ ತನಗೆ ಇಷ್ಟವಾಯಿತು ಎಂದು ಹೇಳಿದರು.

ಪ್ರೊ. ವಿಠಲ ನಾಯಕ್ ಸ್ವಾಗತಿಸಿದರು. ಎನ್.ಭವಾನಿಶಂಕರ್ ಶುಭಾಶಂಸನೆಗೈದರು. ಪ್ರಾಂಶುಪಾಲರಾದ ಪ್ರೊ. ವಿ.ಎನ್.ರಾಜನ್ರವರು ಒಬ್ಬಳೇ ಲಂಡನ್ನಿಗೆ ಹೋಗಿ ಬಂದಂತಹ ಧೈರ್ಯವನ್ನು ಶ್ಲಾಘಿಸಿದರು. ಗೋಪಾಲಕೃಷ್ಣ ಸಾಮಗರು ವಂದಿಸಿದರು. ಡಾ. ಪದ್ಮನಾಭಭಟ್ ಉಪಸ್ಥತರಿದ್ದರು.


ಶಿರ್ವ: ಟಿಸಿಲು ಕವನ ಸಂಕಲನ ಬಿಡುಗಡೆ



ಸಂತ ಮೇರಿಕಾಲೇಜಿನ ವಿದ್ಯಾಥರ್ಿಗಳಾದ ದರ್ಶನ್ ಬಿ.ಶೆಟ್ಟಿ ಮತ್ತುತನುಜಯರವರು ರಚಿಸಿದ 'ಟಿಸಿಲು' ಕವನ ಸಂಕಲನವನ್ನುಸಾಹಿತ್ಯ ಸಂಘದಕಾರ್ಯಕ್ರಮದಲ್ಲಿಪ್ರಾಧ್ಯಾಪಕರಾದ ಮೇಜರ್ ಪಾಸ್ಕಲ್ಡೇಸರವರು ಬಿಡುಗಡೆ ಮಾಡಿ ವಿದ್ಯಾಥರ್ಿಗಳಾದ ಸೃಜನಶೀಲತೆಯ ಬಗ್ಗೆ ಮೆಚ್ಚಿಕೆಯನ್ನು ವ್ಯಕ್ತಪಡಿಸಿದರು.ಕನ್ನಡಉಪನ್ಯಾಸಕರಾದಪ್ರೊ.ಯಶೋಧರವರು ಸಂಕಲನದಕವನಗಳ ಸೌಂದರ್ಯವನ್ನು ಪರಿಚಯಿಸಿದರು.ಪ್ರಾಂಶುಪಾಲರಾದ ಪ್ರೊ. ವಿ.ಎನ್.ರಾಜನ್ರವರುವಿದ್ಯಾಥರ್ಿ ಕವಿಗಳ ಸಾಧನೆಯ ಬಗ್ಗೆ ತಮ್ಮ ಪ್ರಶಂಸೆಯನ್ನು ವ್ಯಕ್ತಪಡಿಸಿದರು.ಪ್ರೊ. ವಿಠಲ ನಾಯಕ್, ಪ್ರೊ. ಎನ್. ಭವಾನಿಶಂಕರ್, ಪ್ರೊ.ಸುಬ್ರಹ್ಮಣ್ಯರವರುಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



ಎನ್.ಭವಾನಿಶಂಕರ್‌ರವರ ಕೃತಿ ಬಿಡುಗಡೆ
“ಹೆಣ್ಣು ಮಕ್ಕಳಿಗೆ ಆಪ್ತ ಸಲಹೆ”
ಹೆಣ್ಣು ಮಕ್ಕಳಿಗೆ ದಾರಿ ದೀಪವಾಗುವ ಕೃತಿ



ಸಂತ ಮೇರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಎನ್.ಭವಾನಿಶಂಕರ್‌ವರು ರಚಿಸಿದ ಹೆಣ್ಣು ಮಕ್ಕಳಿಗೆ ಆಪ್ತ ಸಲಹೆ ಎಂಬ ಕೃತಿಯನ್ನು ತೆಂಕನಿಡಿಯೂರು ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕರಾದ ಡಾ.ನಿಕೇತನರವರು ಬಿಡುಗಡೆಗೊಳಿಸಿದರು. ಅವರು ಮಾತನಾಡುತ್ತ ಈ ಪುಸ್ತಕವು ಹೆಣ್ಣು ಮಕ್ಕಳ ಋತುಸ್ರಾವದ ವೈಜ್ಞಾನಿಕ ವಿವರಗಳು, ಚಿಕ್ಕ ಹೆಣ್ಣು ಮಕ್ಕಳ ಬಗ್ಗೆ ತಂದೆ ತಾಯಿ ವಹಿಸಬೇಕಾದ ಎಚ್ಚರಿಕೆ, ಯೌವ್ವನಕ್ಕೆ ಬಂದ ಯುವತಿಯು ಪ್ರೇಮ ಮತ್ತು ಕಾಮದ ಮುಂದಿನ ದುಷ್ಪರಿಣಾಮಗಳನ್ನು ಅರ್ಥಮಾಡಿಕೊಂಡು ನಿರ್ವಹಿಸಬೇಕಾದ ಜವಾಬ್ದಾರಿ, ಗರ್ಭಧಾರಣೆಯ ಪ್ರತಿಯೊಂದು ಹಂತಗಳು, ಬಸಿರಿನೊಳಗಿನ ಮಗುವು ತನ್ನದೇ ಭಾವನೆಗಳೊಂದಿಗೆ ಬೆಳೆಯುವ ಮತ್ತು ಆಟವಾಡುವ ರೀತಿ, ಗರ್ಭಪಾತದ ಸಂದರ್ಭದಲ್ಲಿ ಮಗುವಿನ ಅಂಗಾಂಗಗಳನ್ನು  ಕತ್ತರಿಸಿ ಕೀಳುವಾಗ ಬಸಿರಿನೊಳಗಿನ ಮಗುವು ಅನುಭವಿಸುವ ಹಿಂಸೆಯನ್ನು ವಿವರವಾಗಿ ಪರಿಚಯಿಸುತ್ತದೆ.

ಡಾ. ಪದ್ಮನಾಭ ಭಟ್‌ವರು  ಮಾತನಾಡುತ್ತ ಈ ಕೃತಿಯು ಯುವತಿಯರು ತಮ್ಮ ಪ್ರೇಮ ಮತ್ತು ಮದುವೆಯ ವಿಷಯಕ್ಕೆ ಸಂಬಂಧಿಸಿದಂತೆ ತಂದೆ ತಾಯಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದ ನೆಲೆ, ವಿವಾಹದಲ್ಲಿ ಅಂತರ್ಜಾತೀಯ ಸಂಬಂಧಗಳನ್ನು ನಿರ್ವಹಿಸಬೇಕಾದ ರೀತಿ, ಮುಕ್ತ ಕಾಮದ ಅವಾಂತರಗಳು, ರೇಪ್ ಕುರಿತ ಇತ್ತೀಚಿನ ಕಾನೂನುಗಳು-ಈ ಎಲ್ಲವನ್ನು ಕೃತಿಯು ವಿಶದವಾಗಿ ಪರಿಚಯಿಸುತ್ತದೆ ಎಂದು ಹೇಳಿದರು. ನೂರಾರು ಚಿತ್ರಗಳಿರುವ ಈ ಕೃತಿಯು ಮಹಿಳಾ ವೈದ್ಯೆಯೋರ್ವರು ವೈದ್ಯಕೀಯ ನೆಲೆಯಲ್ಲಿ ವಿವರವಾಗಿ ಬರೆದಂತೆ ಕೃತಿಯಂತೆ ಇದು ಇದೆ ಎಂದು ಪ್ರಶಂಸಿಸಿದರು.


ಪ್ರಾಂಶುಪಾಲರಾದ ಪ್ರೊ. ವಿ.ಎನ್.ರಾಜನ್ರವರು ದಾರಿ ತಪ್ಪುತ್ತಿರುವ ಇಂದಿನ ಯುವತಿಯರಿಗೆ ಮತ್ತು ಹೆತ್ತವರಿಗೆ ಈ ಕೃತಿಯು ಒಂದು ದಾರಿದೀಪವಾಗಿದೆ ಎಂದು ಹೇಳಿದರು. ಕುಮಾರಿ ಶೋಭಾ ಸ್ವಾಗತಿಸಿದರು. ಸಾಹಿತ್ಯ ಸಂಘದ ನಿರ್ದೇಶಕರಾದ ಪ್ರೊ.ವಿಠಲನಾಯಕ್ ವಂದಿಸಿದರು. ರೈನಾ ಮಥಾಯ್ಸ್ ಕಾರ್ಯಕ್ರಮವನ್ನು ನಿರೂಪಿಸಿದರು.

ಶಿರ್ವ: ಎನ್.ಭವಾನಿಶಂಕರ್ರವರ ಕೃತಿ ಬಿಡುಗಡೆ
"ಇಂಗ್ಲಿಷ್ ಅಂದ್ರೆ ತುಂಬಾ ಸುಲಭ" 




ಸಂತ ಮೇರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಎನ್.ಭವಾನಿಶಂಕರ್ರವರು ರಚಿಸಿದ ಇಂಗ್ಲಿಷ್ ಅಂದ್ರೆ ತುಂಬಾ ಸುಲಭ ಎಂಬ ಕೃತಿಯನ್ನು ಉಡುಪಿಯ ಪೂರ್ಣ ಪ್ರಜ್ಞಾ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಶ್ರೀಕಾಂತ್ ರಾವ್ ಅವರು ಬಿಡುಗಡೆಗೊಳಿಸಿದರು. ಅವರು ಮಾತನಾಡುತ್ತ ಈ ಪುಸ್ತಕವು ಕತೆ ಹೇಳಿದ ರೀತಿಯಲ್ಲಿ ಸ್ವಲ್ಪವೂ ಬೋರಾಗದಂತೆ ಇಂಗ್ಲೀಷನ್ನು ಕಲಿಸುತ್ತದೆ. ಕಥನ ಕ್ರಮದಲ್ಲಿ ಮಾಡಿದ ನಿರೂಪಣೆಯೇ ಈ ಪುಸ್ತಕದ ವಿಶೇಷ. ಇಂಗ್ಲೀಷಿನ ಕಲಿಕೆಗೆ ಬೇಕಾದ ಎಲ್ಲವೂ ಇಲ್ಲಿನ 280 ಪುಟಗಳಲ್ಲಿದೆ. ಇದರ ಜೊತೆಗೆ ವಿರುದ್ಧಾರ್ಥಕ ಪದಗಳು, ಸಮಾನಾರ್ಥಕ ಪದಗಳು, ಇಂಗ್ಲಿಷ್ ನುಡಿಗಟ್ಟುಗಳು-ಇವುಗಳಿಗೆ ಕನ್ನಡ ಅನುವಾದ, ಪ್ರಾಣಿ, ಪಕ್ಷಿ, ದೇಹದ ಅಂಗಗಳಂತಹ ಹತ್ತಾರು ವಿಷಯಗಳ ಇಂಗ್ಲಿಷ್ ಪದಗಳು ಮತ್ತು ಅವುಗಳಿಗೆ ಕನ್ನಡದಲ್ಲಿ ಅರ್ಥ ಇಲ್ಲಿದೆ. ಇಂಗ್ಲಿಷ್ ಕವನ, ಕಾದಂಬರಿಗಳ ತುಣುಕುಗಳ ಕನ್ನಡಾನುವಾದ ಮತ್ತು ಮಾತನಾಡುವ ಇಂಗ್ಲೀಷಿನ 5000 ಕ್ಕೂ ಹೆಚ್ಚು ಇಂಗ್ಲಿಷ್ ವಾಕ್ಯಗಳು ಮತ್ತು ಅದರ ಕನ್ನಡಾನುವಾದವನ್ನು ನೀಡಲಾಗಿದೆ. ಇವುಗಳೊಂದಿಗೆ ಅರ್ಥಪೂರ್ಣವಾದ 200 ಕ್ಕೂ ಹೆಚ್ಚು ಚಿತ್ರಗಳಿವೆ.

ಸಾಹಿತ್ಯ ಸಂಘದ ಆಶ್ರಯದಲ್ಲಿ ಈ ಕಾರ್ಯಕ್ರಮವು ನಡೆಯಿತು. ಪ್ರಾಂಶುಪಾಲರಾದ ಪ್ರೊ.ವಿ.ಎನ್.ರಾಜನ್ರವರು ಕಂಪ್ಯೂಟರ್, ಇಂಟರ್ನೆಟ್, ವೆಬ್ಸೈಟ್, ವ್ಯಕ್ತಿತ್ವ ವಿಕಸನ, ಮಕ್ಕಳಿಗಾಗಿ ವಿಜ್ಞಾನ ಕವನಗಳು, ಕಾನೂನು, ಭಗವದ್ಗೀತೆ, ಕಾರ್ಡ್ರೈವಿಂಗ್ನಂತಹ ಬೇರೆ ಬೇರೆ ರೀತಿಯ 20 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದ ಲೇಖಕರಿಗೆ ಶುಭವನ್ನು ಹಾರೈಸಿದರು. ಡಾ. ಪದ್ಮನಾಭ ಭಟ್ರವರು ಸ್ವಾಗತಿಸಿದರು. ಸಾಹಿತ್ಯ ಸಂಘದ ನಿದರ್ೇಶಕರಾದ ಪ್ರೊ. ವಿಠಲ ನಾಯಕ್ ವಂದಿಸಿದರು. ಎಡ್ಲಿನ್ ಪಿರೇರವರು ಕಾರ್ಯಕ್ರಮವನ್ನು ನಿರೂಪಿಸಿದರು.



ಶಿರ್ವ: ಎನ್.ಭವಾನಿಶಂಕರ್ರವರ ಕೃತಿ ಬಿಡುಗಡೆ
ವಿವಿಧ ಪ್ರಕಾರದ ನಟನೆಗಳ ಕಲಿಕೆಯ ಯಶಸ್ವೀ ಕೃತಿ-ಡಾ. ಗಣನಾಥ ಎಕ್ಕಾರು


ಎನ್.ಭವಾನಿಶಂಕರ್ರವರ ನೂತನ ಕೃತಿಯಾದ ನಟನೆ ಕಲಿಯಿರಿ ಎಂಬ ಕೃತಿಯನ್ನು ತೆಂಕನಿಡಿಯೂರಿನ ಪ್ರಥಮ ದಜರ್ೆ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಗಣನಾಥ ಎಕ್ಕಾರ್ರವರು ಬಿಡುಗಡೆ ಮಾಡಿದರು. ಕೃತಿಯನ್ನು ಬಿಡುಗಡೆ ಮಾಡಿದ ಅವರು ಎನ್.ಭವಾನಿಶಂಕರ್ರವರ ಈ ಕೃತಿಯು ಅತ್ಯಂತ ಸರಳವಾದ ಭಾಷೆಯಲ್ಲಿದ್ದು ನಾಟಕದ ನಟನೆ, ಸಿನಿಮಾದ ನಟನೆ, ಯಕ್ಷಗಾನ, ಬೀದಿ ನಾಟಕಗಳ ನಟನೆ, ಹರಿಕತೆ, ತಾಳಮದ್ದಳೆಗಳ ವಾಚಿಕಾಭಿನಯದ ನಟನೆಗಳ ರೀತಿಯನ್ನು ಅತ್ಯಂತ ಸುಂದರವಾಗಿ ಪರಿಚಯಿಸಿದೆ. ಅವರು ವಿವಿಧ ಪ್ರಕಾರದ ನಟನೆಗಳನ್ನು ಪರಸ್ಪರ ಹೋಲಿಸಿ (ನಾಟಕದ ನಟನೆ-ಸಿನಿಮಾದ ನಟನೆಗಳ.... ಹೋಲಿಕೆ, ವ್ಯತ್ಯಾಸ) ಅವುಗಳ ವಿಶೇಷತೆಗಳನ್ನು ಪರಿಚಯಿಸುತ್ತಾರೆ. ಪಶ್ಚಿಮದ ಸ್ಟಾನಿಸ್ಲಾವ್ಸ್ಕಿ, ಪೂರ್ವದ ಭರತನ ನಾಟ್ಯಶಾಸ್ತ್ರದಿಂದ ಹಿಡಿದು ಬೇರೆ ಬೇರೆ ನಟನೆಯ ಸಿದ್ಧಾಂತಗಳನ್ನು ಪರಿಚಯಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ನಟನೆಯನ್ನು ಕಲಿಸುವ ಆಟಗಳನ್ನು ಸ್ವಾರಸ್ಯಕರವಾದ ರೀತಿಯಲ್ಲಿ ನಿರೂಪಿಸಿ, ನಟನೆಯ ಪಾರಿಭಾಷಿಕ ಕೋಶವನ್ನು ನೀಡಿದ್ದಾರೆ. ನಟನೆಯನ್ನು ಕಲಿಯುವವರಿಗೆ ಇದು ಒಂದು ಕೈಗನ್ನಡಿ. ಅಂತಿಮವಾಗಿ ನಟನೆಯಿಂದ ವ್ಯಕ್ತಿತ್ವ ವಿಕಸನ ಸಾಧ್ಯವಾಗುವ ರೀತಿಯನ್ನು ಅತ್ಯಂತ ವಿವರವಾಗಿ  ಪರಿಚಯಿಸಿದ್ದಾರೆ. 
ಶುಭಾಶಂಸನೆಗೈದ ಡಾ.ಪದ್ಮನಾಭ ಭಟ್ರವರು ಭವಾನಿಶಂಕರ್ರವರ ಕಂಪ್ಯೂಟರ್, ಇಂಟರ್ನೆಟ್, ನೆಟ್ವಕರ್ಿಂಗ್, ಕಾರ್ ಡ್ರೈವಿಂಗ್, ಭಗವದ್ಗೀತೆ, ಮಹಾಭಾರತ, ಕಾನೂನು, ಮಕ್ಕಳ ಕವನಗಳಂತಹ 20 ಕ್ಕೂ ಹೆಚ್ಚು ವಿವಿಧ ವಿಷಯಗಳ ಕೃತಿಗಳ ಮೂಲಕ ಸಾಮಾನ್ಯ ಜನರಲ್ಲಿ ಕುಶಲತೆಯ ಕಲಿಕೆ ಮತ್ತು ಮೌಲ್ಯ ಪ್ರಜ್ಞೆಯನ್ನು ಅರಳಿಸಿದ್ದಾರೆ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿ.ಎನ್.ರಾಜನ್ರವರು ಎನ್.ಭವಾನಿಶಂಕರ್ರವರು ತಮ್ಮ ವಿಶಿಷ್ಟವಾದ ವಸ್ತು  ಮತ್ತು ಸರಳವಾದ ಶೈಲಿಯ ಮೂಲಕ ಕನ್ನಡದ ಅತ್ಯುತ್ತಮ ಲೇಖಕರಾಗಿದ್ದಾರೆ ಎಂದು ಹೇಳುತ್ತ ಶುಭ ಹಾರೈಸಿದರು. ಸಾಹಿತ್ಯ ಸಂಘದ ನಿದರ್ೇಶಕರಾದ ಪ್ರಾಧ್ಯಪಕ ವಿಠಲ ನಾಯಕ್ ಸ್ವಾಗತಿಸಿದರು. ವಿದ್ಯಾಥರ್ಿ ಪ್ರತಿನಿಧಿಗಳಾದ ಶಾಈನ್ ಮತ್ತು ತನುಜಯ ಉಪಸ್ಥಿತರಿದ್ದರು. ಶೈನಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.  


'ಮಕ್ಕಳಿಗಾಗಿ ವಿಜ್ಞಾನ ಕವನಗಳು'
 ಶಿರ್ವ: ಎನ್.   ಭವಾನಿಶಂಕರ್‌ರವರ ಮಕ್ಕಳ ಮನಸ್ಸಿಗೆ ಇಲ್ಲಿದೆ ಮದ್ದು ಕೃತಿ ಬಿಡುಗಡೆ



ಎನ್.ಭವಾನಿಶಂಕರ್‌ರವರ ನೂತನ ಕೃತಿಯಾದ ಮಕ್ಕಳ ಮನಸ್ಸಿಗೆ ಇಲ್ಲಿದೆ ಮದ್ದು ಎಂಬ ಕೃತಿಯನ್ನು ಮಂಗಳೂರು ವಿವಿ ಕನ್ನಡ ಪ್ರಾಧ್ಯಾಪಕರ ಸಂಘದ ಅಧ್ಯಕ್ಷರಾದ ಪ್ರೊ. ಪಿ. ಕೃಷ್ಣಮೂರ್ತಿಯವರು ಬಿಡುಗಡೆ  ಮಾಡಿದರು. ಕೃತಿಯನ್ನು ಬಿಡುಗಡೆ ಮಾಡಿದ ಅವರು ಎನ್.ಭವಾನಿಶಂಕರ್‌ರವರ ಮಕ್ಕಳ ಕವನಗಳ ಈ ಕೃತಿಯು ಬಹಳ ಅಪರೂಪದ ಕೃತಿಯಾಗಿದೆ. ಆಕಾಶ ಸುತ್ತುವ ಸ್ಯಾಟಲೈಟುಗಳು, ಬಾಹ್ಯಾಕಾಶದ ಮನೆಯೊಳಗೆ, ಭೂಮಿಯು ತಿರುಗುತ್ತಿದ್ದರೂ ನಮಗೇಕೆ ತಿಳಿಯುವುದಿಲ್ಲ, ನ್ಯೂಯಾಕರ್ಿನ ಮೇಲೆ ವಿಮಾನ ನಿಂತರೆ, ಟೀವಿಯಲ್ಲಿ ಚಿತ್ರ ಬರುವುದು ಹೇಗೆ?, ಕಂಪ್ಯೂಟರ್ ಎಂದರೇನು, ಇದರಲ್ಲಿ ಕಂಬಳಿ ಹುಳ ಚಿಟ್ಟೆಯಾಗುವುದು, ಬಾವಲಿಯ ಕಿವಿಯಿಂದ ಹುಟ್ಟಿದ ರಾಡಾರ,......ಎನ್ನುವಂತಹ ವಿಜ್ಞಾನ ಕವನಗಳನ್ನು ಮೊಟ್ಟ ಮೊದಲಿಗೆಂಬಂತೆ ಬರೆದಿದ್ದಾರೆ. ಅತ್ಯಂತ ಕ್ಲಿಷ್ಟವಾದ ಆಧುನಿಕವಾದ ವಿಜ್ಞಾನ ಮತ್ತು ತಂತ್ರಜ್ಞಾನದ ಸಂಗತಿಗಳನ್ನು ಸರಳಗೊಳಿಸಿ ಕನ್ನಡದ ಕವನವಾಗಿಸಿದ್ದಾರೆ. 

ಇದರ ಜೊತೆಗೆ ಈ ಪುಸ್ತಕದಲ್ಲಿ  ಆಲಿಬಾಬಾ, ಸಮುದ್ರದ ಮೇಲೆ ಹಾರಿದ ಡೆಡಾಲಸ್, ಮುಟ್ಟಿದ್ದೆಲ್ಲ ಚಿನ್ನವಾಗಲಿ ಎಂಬ ಮಿಡಾಸ, ಕಟ್ಟಿಗೆ ಮಾರುವ ಬಡವ, ಪುಣ್ಯಕೋಟಿ,...... ರೀತಿಯ ಕಥಾ ಕವನಗಳು ಮತ್ತು ಹುಳಿ ದ್ರಾಕ್ಷಿ, ನೀರಿಗೆ ಕಲ್ಲು ಹಾಕಿದ ಕಾಗೆ, ಚಿನ್ನದ ಮೊಟ್ಟೆಯ ಬಾತುಕೋಳಿ, ಮೊಲವೂ ಸಿಂಹವೂ ಬಾವಿಯೂ, ಮಂಗನ ಬಾಲ ಚಟ್ನಿ.... ಯಂತಹ ಪ್ರಾಣಿ ಕವನಗಳು ಅತ್ಯಂತ ಚೆನ್ನಾಗಿ ಮೂಡಿ ಬಂದಿವೆ. ಇಲ್ಲಿಯ ಕವನಗಳಲ್ಲಿ ಆಕರ್ಷಕ ಲಯವಿದೆ, ಅಭಿನಯವಿದೆ, ಸರಳತೆ ಇದೆ ಎಂದು ಹೇಳಿದರು.

ಪ್ರಾಂಶುಪಾಲರಾದ ಪ್ರೊ. ವಿ.ಎನ್. ರಾಜನ್ರವರು  ಮಾತನಾಡುತ್ತ ಕಂಪ್ಯೂಟರ್, ಇಂಟರ್ನೆಟ್, ಕಾನೂನು, ಕಾರಿನ ತಂತ್ರಜ್ಞಾನ, ವೆಬ್ಸೈಟು, ಕತೆ ಬರೆಯುವ ಕಲೆ, ಭಗವದ್ಗೀತೆ, ಮಹಾಭಾರತದಂತಹ..... ಕೃತಿಗಳನ್ನು ಬರೆದ ಎನ್.ಭವಾನಿಶಂಕರ್‌ರವರ ಬಹುಮುಖ ಪ್ರತಿಭೆಯ ಬಗ್ಗೆ ಮೆಚ್ಚಿಕೆಯನ್ನು ವ್ಯಕ್ತಪಡಿಸಿದರು. ವಿಜ್ಞಾನ ಕವನಗಳು, ಕಥಾ ಕವನಗಳು, ಪ್ರಾಣಿ ಕವನಗಳ ಈ ಸಂಕಲನ ಸಂಗ್ರಹ ಯೋಗ್ಯವಾದ ಕೃತಿ ಎಂದು ಹೇಳುತ್ತ  ಶ್ರೀ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಶುಭಾಶಂಸನೆಗೈದರು. ಡಾ. ಪದ್ಮನಾಭ ಭಟ್ ಸ್ವಾಗತಿಸಿದರು. ಪ್ರೊ. ಗೋಪಾಕೃಷ್ಣ ಸಾಮಗ ವಂದಿಸಿದರು.

       


ವೆಬ್‌ಸೈಟುಗಳಿಂದ ಜ್ಞಾನ ಪಡೆಯುವುದು ಹೇಗೆ ಮತ್ತು ನೆಟ್‌ವರ್ಕಿಂಗ್ ಕೃತಿ ಬಿಡುಗಡೆ


ಎನ್.ಭವಾನಿಶಂಕರ್‌ರವರ ನೂತನ ಕೃತಿಯಾದ ವೆಬ್‌ಸೈಟುಗಳಿಂದ ಜ್ಞಾನ ಪಡೆಯುವುದು ಹೇಗೆ? ಮತ್ತು ನೆಟ್ ವರ್ಕಿಂಗ್ ಎಂಬ ಕೃತಿಯನ್ನು ಪ್ರೊ. ಪ್ರೀಮಾ ಡಿಸೋಜರವರು ಬಿಡುಗಡೆ ಮಾಡಿದರು. ಕೃತಿಯನ್ನು ಬಿಡುಗಡೆ ಮಾಡಿದ ಅವರು ಈ ಕೃತಿಯು ಇಂಟರ್‌ನೆಟ್ ಲೋಕದ ಅತ್ಯಾಧುನಿಕವಾದ ಜ್ಞಾನವನ್ನು ನೀಡುತ್ತದೆ ಎಂದು ತಿಳಿಸಿದರು. ಈ ಕೃತಿಯಲ್ಲಿ ಉದ್ಯೋಗಕ್ಕಾಗಿ ಆನ್‌ಲೈನ್ ಅರ್ಜಿ, ಆನ್‌ಲೈನ್ ಬ್ಯಾಂಕಿಂಗ್, ಇಂಟರ್‌ನೆಟ್‌ನ ಚರ್ಚಾ ವೇದಿಕೆಗಳು, ಕ್ಲೌಡ್ ಕಂಪ್ಯೂಟಿಂಗ್, ಸರ್ಚ್ ಇಂಜಿನ್‌ನ ಹುಡುಕುವ ವಿಧಾನ, ಗೂಗಲ್ ಮ್ಯಾಪ್ ನೋಡುವ ರೀತಿ, ಆನ್‌ಲೈನ್ ಶೇರು ಮಾರುಕಟ್ಟೆ, ಆನ್‌ಲೈನ್ ರೈಲ್ವೆ ಟಿಕೆಟ್ ರಿಸರ್ವೇಶನ್, ಸ್ಯಾಟಲೈಟ್ ಇಂಟರ್‌ನೆಟ್, ಡ್ರಾಪ್ ಬಾಕ್ಸ್ ಇತ್ಯಾದಿ ವಿಷಯಗಳನ್ನು ಸರಳವಾದ ಭಾಷೆಯಲ್ಲಿ ನಿರೂಪಿಸಿದ್ದಾರೆ ಎಂದು ಹೇಳಿದರು.
ವೆಬ್‌ಸೈಟುಗಳಿಂದ ಜ್ಞಾನ ಪಡೆಯುವುದು ಹೇಗೆ? ಮತ್ತು ನೆಟ್ ವರ್ಕಿಂಗ್ ಎಂಬ ಕೃತಿಯ ಎರಡನೆಯ ಭಾಗದಲ್ಲಿರುವ ಕಂಪ್ಯೂಟರುಗಳನ್ನು ಜೋಡಿಸುವ ನೆಟ್‌ವರ್ಕಿಂಗ್ ತಂತ್ರಕ್ಕೆ ಸಂಬಂಧಿಸಿದಂತೆ, ಕಂಪ್ಯೂಟರ್ ವಿದ್ಯಾರ್ಥಿಗಳಿಗೆ ಸಹಾಯಕವಾಗುವ ವಿಷಯಗಳಾದ ಲೋಕಲ್ ಏರಿಯಾ ನೆಟ್‌ವರ್ಕ್, ರೌಟರ್, ಸ್ವಿಚ್, ಗೇಟ್ ವೆ, ಐಪಿ ಅಡ್ರೆಸ್, ಬ್ರಿಜ್, ಸಬ್‌ನೆಟ್ ಮಾಸ್ಕ್, ಸರ್ವರ್, ವಿ‌ಓ‌ಐಪಿ ಇತ್ಯಾದಿ ವಿಷಯಗಳನ್ನು ಸಾಮಾನ್ಯರೂ ಗ್ರಹಿಸುವಂತೆ ನಿರೂಪಿಸಿದ್ದಾರೆ ಎಂದು ಪ್ರೊ. ಸುಬ್ರಹ್ಮಣ್ಯ ಹೇಳಿದರು.         

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಪದ್ಮನಾಭಭಟ್‌ರವರು ಎನ್.ಭವಾನಿಶಂಕರ್‌ರವರು ಬರೆದಿರುವ ಕೃತಿಗಳಾದ ಕಂಪ್ಯೂಟರ್ ಬಗ್ಗೆ ಏನೂ ತಿಳಿಯದವರಿಗಾಗಿ, ಇಂಟರ್‌ನೆಟ್ ಕಲಿಯಿರಿ, ನಿಮ್ಮನ್ನು ರಕ್ಷಿಸುವ ಕಾನೂನುಗಳು, ಕಾರ್ ಡ್ರೈವಿಂಗ್ ಮತ್ತು ನಿರ್ವಹಣೆ, ಕತೆ ಬರೆಯುವುದು ಹೇಗೆ, ನಗು ಮತ್ತು ಆರೋಗ್ಯ, ಗೆಲ್ಲುವ ದಾರಿಗಳು ಇಲ್ಲಿವೆ, ಸಂಪೂರ್ಣ ಮಹಾಭಾರತ, ಮಕ್ಕಳಿಗಾಗಿ ವಿಜ್ಞಾನ ಕವನಗಳು, ಸರಳ ಭಗವದ್ಗೀತೆ ಇತ್ಯಾದಿ ಕೃತಿಗಳು ಅತ್ಯಂತ ಉಪಯುಕ್ತವಾದುದಾಗಿವೆ ಮಾತ್ರವಲ್ಲದೆ ವಿವಿಧ ಜ್ಞಾನ ಕ್ಷೇತ್ರಗಳ ಬಗ್ಗೆ ಅವರಿಗಿರುವ ಆಸಕ್ತಿಯನ್ನು ತಿಳಿಸುತ್ತದೆ ಎಂದು ಹೇಳಿದರು. ಸ್ವಾತಿ ಸ್ವಾಗತಿಸಿದರು. ಪ್ರೊ. ವಿಠಲ್ ನಾಯಕ್ ವಂದಿಸಿದರು.

ಎನ್.ಭವಾನಿಶಂಕರ್‌ರವರ ಸಂಪೂರ್ಣ ಮಹಾಭಾರತ ಕೃತಿ ಬಿಡುಗಡೆ



ಎನ್.ಭವಾನಿಶಂಕರ್‌ರವರ ನೂತನ ಕೃತಿಯಾದ ಸಂಪೂರ್ಣ ಮಹಾಭಾರತ ವನ್ನು ಕಾದಂಬರಿಕಾರರು ಮತ್ತು ಕತೆಗಾರರಾದ ಶ್ರೀಮತಿ ಕಾತ್ಯಾಯಿನಿ ಕುಂಜಿಬೆಟ್ಟು ಅವರು ಬಿಡುUಡೆ ಮಾಡಿದರು. ಮಹಾಭಾರತದ ೧೮ ಆಶ್ವಾಸಗಳ ಕತೆಯಲ್ಲಿ ಏನನ್ನೂ ಬಿಡದೆ, ಎಲ್ಲವನ್ನೂ ಸಂಕ್ಷೇಪಗೊಳಿಸಿ, ಓದಿಸಿಕೊಂಡು ಹೋಗುವಂತೆ ರೋಚಕವಾಗಿ ಬರೆದಿದ್ದಾರೆ. ಇಡೀ ಕತೆಯನ್ನು ಕೇವಲ ನೂರರಷ್ಟು ಪುಟಗಳಲ್ಲಿ ಸೆರೆ ಹಿಡಿದು ಸಂಕ್ಷಿಪ್ತಗೊಳಿಸಿರುವುದು ಆಸಕ್ತಿಯನ್ನು ಹುಟ್ಟಿಸಿದೆ. ಲೇಖಕರು ಮಹಾಭಾರತದ ಕತೆಯನ್ನು ಹೇಳುತ್ತಲೆ ಅದರ ಜೊತೆಗೆ ತಮ್ಮ ಅಭಿಪ್ರಾಯ, ವಿಡಂಬನೆ ಮತ್ತು ಹಿತವಚನವನ್ನೂ ಸೇರಿಸಿದ್ದಾರೆ. ಮಹಾಭಾರತದ ಯುದ್ಧದ ಅನಂತರದ ದುರಂತದ ವಿವರಗಳು ಯುದ್ಧದ ಪರಿಣಾಮವನ್ನು ಅತ್ಯಂತ ಚೆನ್ನಾಗಿ ಚಿತ್ರಿಸಿದೆ. ವಿಶೇಷವಾಗಿ ಮಕ್ಕಳು ಮತ್ತು ಶಿಕ್ಷಕರು ಓದಲೇಬೇಕಾದ ಕೃತಿ ಇದಾಗಿದೆ ಎಂದರು.
ಪ್ರಾಂಶುಪಾಲರಾದ ಡಾ. ಕ್ಲಾರೆನ್ಸ್‌ಮಿರಾಂಡರವರು ಮಾತನಾಡುತ್ತ ಈ ಕೃತಿಯಲ್ಲಿ ಮಹಾಭಾರತದ ಕತೆಯು ನಡೆದ ಉತ್ತರ ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನದ ಭೂಪಟವನ್ನು ಸ್ವತಃ ಲೇಖಕರೇ ನಿರ್ಮಿಸಿದ್ದಾರೆ. ಇದರಲ್ಲಿರುವ ಮಹಾಭಾತದ ಕತೆಯು ನಡೆದ ಎಲ್ಲಾ ಸ್ಥಳಗಳು ಈಗ ಎಲ್ಲಿವೆ ಎಂಬ ವಿವರಣೆ ಓದುಗರಿಗೆ ಮತ್ತು ಶಿಕ್ಷಕರಿಗೆ ಅತ್ಯಂತ ಉಪಯುಕ್ತವಾದುದಾಗಿದೆ. ಇದರ ಜೊತೆಗೆ ಮಹಾಭಾರದ ಕತೆಯು ನಡೆದ ಕಾಲದ ವಿವರಗಳನ್ನೂ ಅವರು ನೀಡಿರುವುದು ಕೃತಿಗೆ ಹೊಸ ಸೊಬಗನ್ನು ನೀಡಿದೆ ಎಂದು ಹೇಳಿದರು.   
ಸ್ವಾಗತಿಸಿದ ಡಾ. ಎಸ್. ಪದ್ಮನಾಭಭಟ್‌ರವರು ಮಾತನಾಡುತ್ತ ಕಂಪ್ಯೂಟರ್, ಕಾರ್ ಡ್ರೈವಿಂಗ್, ಕಾನೂನಿನಂತಹ ಪುಸ್ತಕಗಳನ್ನು ಬರೆದ ಅವರು ಈ ಕೃತಿಯನ್ನು ಅವರ ಹಿಂದಿನ ಸರಳ ಭಗವದ್ಗೀತೆಯಂತೆ ಅತ್ಯಂತ ಸತಳವಾಗಿ ಬರೆದಿದ್ದಾರೆ ಎಂದರು. ಪ್ರೊ. ವಿಠಲನಾಯಕ್‌ರವರು ಸ್ವಾಗತಿಸಿದರು. ಅಶ್ವಿನ್ ಲಾರೆನ್ಸ್‌ರವರು ಕಾರ್ಯಕ್ರಮ ನಿರೂಪಿಸಿದರು.  ೧೧-೦೧-೨೦೧೩




ಎನ್.ಭವಾನಿಶಂಕರ್‌ರವರ ವಿನೂತನ ಕೃತಿ ಸರಳ ಭಗವದ್ಗೀತೆ ಬಿಡುಗಡೆ


ಎನ್.ಭವಾನಿಶಂಕರ್‌ರವರ ನೂತನ ಕೃತಿಯಾದ ಸರಳ ಭಗವದ್ಗೀತೆ ಯನ್ನು ಕಿನ್ನಿಗೋಳಿಯ ಪೋಂಪೈ ಕಾಲೇಜಿನ ಡಾ. ರಾಧಾಕೃಷ್ಣ ಬಿಡುಗಡೆ ಮಾಡಿದರು. ಅವರು ಮಾತನಾಡುತ್ತ ಈ ಭಗವದ್ಗೀತೆಯು ಸರಳವಾದ ಕನ್ನಡದಲ್ಲಿದ್ದು ಓದಿಸಿಕೊಂಡು ಹೋಗುವ ಹೊಸ ರೀತಿಯ ರಚನೆಯಾಗಿದೆ. ಅರ್ಜುನನು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾನೆ. ಕೃಷ್ಣ ಅವನಲ್ಲಿನ ಆತ್ಮ ವಿಶ್ವಾಸವನ್ನು ಬಡಿದೆಬ್ಬಿಸಿ ಧೈರ್ಯ ತುಂಬುವ ವಿಷಯವು ಮನೋವಿಜ್ಞಾನದ ನೆಲೆಯಲ್ಲಿ ನಿರೂಪಿತವಾಗಿದೆ. ಓದುಗನಲ್ಲಿ ಧೈರ್ಯ ತುಂಬುವ ರೀತಿಯಲ್ಲಿ ಈ ಪುಸ್ತಕವನ್ನು ಬರೆಯಲಾಗಿದೆ. ಇದು ಈ ಕೃತಿಯ ಹೆಗ್ಗಳಿಕೆ. ಇದು ಬಹಳ ಮುಖ್ಯವಾಗಿ ಆತ್ಮ ವಿಶ್ವಾಸವನ್ನು ತುಂಬುವ ಉದ್ದೇಶದಿಂದ ಬರೆದ ಧಾರ್ಮಿಕ ಕೃತಿಯಾಗಿದೆ ಎಂದರು.
ಪ್ರಾಂಶುಪಾಲರಾದ ಡಾ. ಕ್ಲಾರೆನ್ಸ್ ಮಿರಾಂಡರವರು ಮಾತನಾಡುತ್ತ ಲೇಖಕರು ಈ ಕೃತಿಯನ್ನು ಹೈಸ್ಕೂಲಿನ ವಿದ್ಯಾರ್ಥಿಗಳೂ ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಬರೆದಿದ್ದಾರೆ. ವಜ್ರದಂತೆ ಕಠಿಣವಾಗಿ ಕಾಣುವ ಭಗವದ್ಗೀತೆಯನ್ನು ಹಿಮಾಲಯದ ತಂಪು ಗಂಗಾಜಲವಾಗಿಸಿದ್ದಾರೆ. ಬಿಸಿಲಿನ ಧಗೆಯೆಂಬ ಚಿಂತೆಯಲ್ಲಿ ಸೋತು ದಗ್ಧನಾದ ಶ್ರೀಸಾಮಾನ್ಯವಿಗೆ ಇದು ಪರಮ ತೀರ್ಥವೇ ಸರಿ. ಸುಮಾರು ನೂರು ಪುಟಗಳ ಈ ಪುಸ್ತಕದಲ್ಲಿ ಭಗವದ್ಗೀತೆಯ ಅರ್ಥವನ್ನು ತೆರೆದು ತೋರಿಸುವ ೮೦ ಕ್ಕೂ ಹೆಚ್ಚು ಚಿತ್ರಗಳನ್ನು ಲೇಖಕರು ರೂಪಿಸಿರುವುದು ಅದ್ಭುತವಾಗಿದೆ. ಪ್ರತಿಯೊಂದು ಪುಟದಲ್ಲೂ ಭಾರತೀಯ ಸಂಸ್ಕೃತಿಯ ಸ್ವರೂಪವನ್ನು ಬಿಂಬಿಸುವ ಸುಂದರವಾದ ಚಿತ್ರಗಳಿವೆ ಎಂದರು.
ಶುಭಾಶಂಸನೆಗೈದ ಡಾ. ಎಸ್. ಪದ್ಮನಾಭಭಟ್‌ರವರು ಮಾತನಾಡುತ್ತ ಈ ಕೃತಿಯು ಪದ್ಯ ಮತ್ತು ಗದ್ಯದ ಲಕ್ಷಣಗಳನ್ನು ಜೊತೆಗೂಡಿಸಿಕೊಂಡಿದ್ದು ಸುಲಭವಾಗಿ ಓದಿಸಿಕೊಂಡು ಹೋದ ಅನುಭವವನ್ನು ನನಗೆ ನೀಡಿತು. ಇದು ಅಪರೂಪದ ವಿಶಿಷ್ಟ ಕೃತಿ ಎಂದು ಹೇಳಿದರು. ಅಶ್ವಿನ್ ಲಾರೆನ್ಸ್ ಕರ್ನೇಲಿಯೋ ಸ್ವಾಗತಿಸಿದರು. ಈ ಪುಸ್ತಕವು ಅರ್ಪಿತಗೊಂಡ ಗ್ರಂಥಾಲಯದ ಶ್ರೀಮತಿ ಸುಜಾತ ಮತ್ತು ವಿಕ್ಟರ್ ಡಿಸೋಜ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ೧೮-೧೨-೧೨